Vitamin C Rich Foods List In Kannada
ದೇಹದ ವಿಟಮಿನ್ ಸಿ ಪ್ರಮಾಣ ಹೆಚ್ಚಿಸಲು ಆರೋಗ್ಯಕರ ಟ್ರಿಕ್ಸ್
Mahantesh Batakurki | Vijaya Karnataka | Updated: Aug 6, 2020, 2:50 PM
ವಿಟಮಿನ್ ' ಸಿ ' ಅಂಶ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ನಮ್ಮನ್ನು ಕೊರೊನ ಸೋಂಕಿನಿಂದ ದೂರವಿರಿಸುತ್ತದೆ.
ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನಮಗೆ ವಿಟಮಿನ್ ' ಸಿ ' ಅಂಶಗಳನ್ನು ಒಳಗೊಂಡ ಆಹಾರವನ್ನು ಸೇವಿಸುವ ಅವಶ್ಯಕತೆ ಇರುತ್ತದೆ. ನಾವು ಪ್ರತಿ ದಿನ ಬಗೆ ಬಗೆಯ ಆಹಾರಗಳನ್ನು ಸೇವನೆ ಮಾಡುತ್ತೇವೆ.
ಆದರೆ ಅವುಗಳಲ್ಲಿ ವಿಟಮಿನ್ ' ಸಿ ' ಅಂಶ ಹೆಚ್ಚಿಗೆ ಇರುವ ಆಹಾರಗಳು ಯಾವುವು ಎಂಬುದು ನಮಗೆ ಅಷ್ಟಾಗಿ ತಿಳಿದಿರುವುದಿಲ್ಲ. ಹಾಗಾಗಿ ಈ ಲೇಖನದಲ್ಲಿ ನಿಮಗೆ ಅಗತ್ಯವಾದ ಮಾಹಿತಿಯನ್ನು ನಿಮ್ಮ ಆರೋಗ್ಯದ ಅನುಗುಣವಾಗಿ ಒದಗಿಸಲಾಗಿದೆ.
ವಿಟಮಿನ್ ' ಸಿ ' ನ ದಿನದ ಅಗತ್ಯತೆ ಹೀಗಿದೆ ನೋಡಿ
- ನಮ್ಮ ದೇಹ ವಿಟಮಿನ್ ' ಸಿ ' ಅಂಶವನ್ನು ತನ್ನ ಅಗತ್ಯಕ್ಕೆ ತಕ್ಕಂತೆ ಉತ್ಪತ್ತಿ ಮಾಡಲು ಸಾಧ್ಯ ಆಗುವುದಿಲ್ಲ. ಈ ಸಮಯದಲ್ಲಿ ನಾವು ಹೊರಗಿನಿಂದಲೇ ಅಂದರೆ ಬೇರೆ ಆಹಾರ ಪದಾರ್ಥಗಳಿಂದ ಇದನ್ನು ಪಡೆಯಬೇಕಾಗುತ್ತದೆ. ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ ಸುಮಾರು 65 ರಿಂದ 90 ಮಿಲಿ ಗ್ರಾಂ ವಿಟಮಿನ್ ' ಸಿ ' ಅಂಶ ಬೇಕಾಗಿರುತ್ತದೆ.
- ಯಾವುದೇ ಒಬ್ಬ ವ್ಯಕ್ತಿ ದಿನದಲ್ಲಿ 2000 ಮಿಲಿ ಗ್ರಾಂ ಗಿಂತ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಅಂಶವನ್ನು ಸೇವಿಸುವಂತಿಲ್ಲ. ಯಾವ ಆಹಾರ ಪದಾರ್ಥಗಳಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ' ಸಿ ' ಅಂಶ ಇರುವುದು ಕಂಡು ಬರುತ್ತದೆ, ಅಂತಹ ಆಹಾರ ಪದಾರ್ಥಗಳನ್ನು ನಾವು ವೈದ್ಯರ ಸೂಚನೆಯಂತೆ ಮಾತ್ರವೇ ಸೇವಿಸಬೇಕಾಗುತ್ತದೆ.
- ಉದಾಹರಣೆಗೆ ಕಿತ್ತಳೆ ಹಣ್ಣು, ಬ್ರೊಕೋಲಿ, ಕೆಂಪು ಬಣ್ಣದ ದಪ್ಪ ಮೆಣಸಿನಕಾಯಿ ನಮ್ಮ ಆರೋಗ್ಯಕ್ಕೆ ಸಾಕಷ್ಟು ವಿಟಮಿನ್ ' ಸಿ ' ಅಂಶವನ್ನು ಒದಗಿಸುವುದರ ಜೊತೆಗೆ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ನಾವು ಸೇವಿಸುವ ವಿಟಮಿನ್ ' ಸಿ ' ಅಂಶ ಕೂಡ ಒಂದು ಮಿತಿಯಲ್ಲಿರಬೇಕು.
- ಒಂದು ವೇಳೆ ಇದು ಹೆಚ್ಚಾದರೆ ನಮಗೆ ವಾಕರಿಕೆ, ವಾಂತಿ, ಭೇದಿ, ತಲೆ ನೋವು, ಇನ್ಸೋಮ್ನಿಯಾ, ಎದೆಯುರಿ ಮತ್ತು ಕೈ ಕಾಲುಗಳ ಸೆಳೆತ ಉಂಟಾಗುವ ಸಾಧ್ಯತೆ ಇರುತ್ತದೆ. ಆದರೆ ಈ ಮೇಲೆ ತಿಳಿಸಿದ ಆಹಾರಗಳು ನಮ್ಮ ದಿನದ ಹತ್ತಿರಕ್ಕೆ ತಕ್ಕಂತೆ ನಮಗೆ ವಿಟಮಿನ್ ' ಸಿ ' ಅಂಶವನ್ನು ಒದಗಿಸುತ್ತದೆ.
ಇವು 'ವಿಟಮಿನ್ ಸಿ' ಇರುವ ಆಹಾರಗಳು, ಆರೋಗ್ಯಕ್ಕೆ ಒಳ್ಳೆಯದು...
ಹೀಗೊಂದು ತಂತ್ರ ಅನುಸರಿಸಿ
- ನೀವು ನಿಮ್ಮ ಮನೆಯಲ್ಲಿ ಪ್ರತಿ ದಿನ ತಯಾರು ಮಾಡುವ ಯಾವುದೇ ಬಗೆಯ ದಾಲ್, ಸಬ್ಜಿ, ಸೂಪ್, ಸಲಾಡ್ ಇತ್ಯಾದಿಗಳಿಗೆ ಸ್ವಲ್ಪ ನಿಂಬೆ ರಸ ಹಿಂಡಿ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.
- ಏಕೆಂದರೆ ಒಂದು ಹೋಳು ನಿಂಬೆ ಹಣ್ಣಿನ ರಸದಲ್ಲಿ ಸುಮಾರು 83 ಮಿಲಿ ಗ್ರಾಂ ವಿಟಮಿನ್ ' ಸಿ ' ಅಂಶ ಇರುತ್ತದೆ. ಇದು ವೈದ್ಯರು ಪ್ರತಿ ದಿನ ಸೂಚಿಸಿರುವ ಅಗತ್ಯತೆಯ ಶೇಕಡ 92 % ದಷ್ಟು ವಿಟಮಿನ್ ' ಸಿ ' ಅಗತ್ಯತೆಯನ್ನು ನಿಮ್ಮ ದೇಹಕ್ಕೆ ಪೂರೈಸುತ್ತದೆ.
ವಿಟಮಿನ್ ' ಸಿ ' ಅಂಶವನ್ನು ಒಳಗೊಂಡ ಆಹಾರಗಳು
- ಸೀಬೆ ಹಣ್ಣು, ಪರಂಗಿ ಹಣ್ಣು, ಕಿತ್ತಳೆ ಹಣ್ಣು, ಸ್ಟ್ರಾಬೆರಿ, ಬ್ರೊಕೋಲಿ, ಕಿವಿ, ಕೇಲ್, ಲಿಚಿ ಹಣ್ಣು, ಪಾರ್ಸಲಿ ಹಣ್ಣು ಇತ್ಯಾದಿಗಳಲ್ಲಿ ವಿಟಮಿನ್ ' ಸಿ ' ಅಂಶ ಸಾಕಷ್ಟು ಕಂಡು ಬರುತ್ತದೆ.
- ಹಾಗಾಗಿ ನಿಮಗೆ ಸಾಧ್ಯವಾದಷ್ಟು ಪ್ರತಿ ದಿನವೂ ಇಂತಹ ಹಣ್ಣುಗಳನ್ನು ನಿಮ್ಮ ಮಧ್ಯಾಹ್ನದ ಊಟದ ನಂತರ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳುವುದರಿಂದ ದಿನ ಕಳೆದಂತೆ ಕ್ರಮೇಣವಾಗಿ ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತಾ ಹೋಗುತ್ತದೆ.
- ಇದರಿಂದ ನಿಮ್ಮನ್ನು ನೀವು ಮಳೆಗಾಲದಲ್ಲಿ ಎದುರಾಗುವ ಸಣ್ಣ ಪುಟ್ಟ ಸೋಂಕುಗಳಿಂದ ಕಾಪಾಡಿಕೊಳ್ಳಲು ಸಹಾಯ ಆಗುತ್ತದೆ. ನೀವು ಸಹ ಇವುಗಳನ್ನು ಸೇವಿಸಿ ನಿಮ್ಮ ಮನೆಯ ಮಂದಿಗೂ ಸೇವಿಸಲು ತಿಳಿಸಿ.
Read in English : The easiest diet trick to boost your vitamin C levels
Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್ ಮಾಡಿಕೊಳ್ಳಿ ಹಾಗೂ ರಿಪೋರ್ಟ್ ಕಳಿಸಿ
ಕೀವರ್ಡ್ಸ್
Web Title : easy ways to get more vitamin c, to your body
Kannada News from Vijaya Karnataka, TIL Network
Vitamin C Rich Foods List In Kannada
Source: https://vijaykarnataka.com/lifestyle/health/easy-ways-to-get-more-vitamin-c-to-your-body/articleshow/77390217.cms
Posting Komentar